ಶಿವರಾಜ್‌ಕುಮಾರ್ ದಂಪತಿಗಳಿಗೆ ಸನ್ಮಾನ
Posted date: 16 Sat, May 2015 – 08:40:24 AM

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ.  ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಬಾರಿಸಿ ಯಶಸ್ವಿಯಾಗಿ ಮುನ್ನಡೆದಿರುವ ಯಶಸ್ವಿ ನಟ ಶಿವರಾಜ್‌ಕುಮಾರ್.

ಶಿವರಾಜ್‌ಕುಮಾರ್‌ಗೆ ಇದೇ ೧೯ ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಯಶಸ್ವಿ ೨೯ ವರ್ಷ ಪೂರೈಸಿದ ಸಂಭ್ರಮ.  

ಈ ಶುಭ ಸಂದರ್ಭದಲ್ಲಿ ಇದೇ ೧೯ ರಂದು ಶ್ರೀ ಮುತ್ತು ಡಾ|| ಶಿವರಾಜ್‌ಕುಮಾರ್ ಕನ್ನಡ ಯುವ ವೇದಿಕೆ (ರಿ.) ಯು ಗೌರವ ಡಾಕ್ಟರೇಟ್ ಹಾಗೂ ಯಶಸ್ವೀ ದಾಂಪತ್ಯ ಜೀವನ ನಡೆಸಿದ ಶಿವರಾಜ್‌ಕುಮಾರ್ - ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ದಂಪತಿಗಳಿಗೆ ರಾಜಾಜಿನಗರದ  ಡಾ|| ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿ ಅದ್ಧೂರಿ ಸನ್ಮಾನ ಸಮಾರಂಭ ಏರ್ಪಡಿಸಿದೆ.  

ಚಿತ್ರೋದ್ಯಮದ ಬಹುತೇಕ ಗಣ್ಯರು ಈ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಂಘವು ತಿಳಿಸಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed